Home Featured ಕುವೈಟ್ ಮತ್ತು ನಾಗಪುರಗಳಲ್ಲಿ ಪ್ರಾಣ ಕಳೆದು ಕೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಭದ್ರತೆ ಒದಗಿಸ ಬೇಕು!

ಕುವೈಟ್ ಮತ್ತು ನಾಗಪುರಗಳಲ್ಲಿ ಪ್ರಾಣ ಕಳೆದು ಕೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಭದ್ರತೆ ಒದಗಿಸ ಬೇಕು!

by admin

Trade Union Centre Of India(TUCI) Central Committee

Press release

ಕುವೈಟ್ ಮತ್ತು ನಾಗಪುರಗಳಲ್ಲಿ ಪ್ರಾಣ ಕಳೆದು ಕೊಂಡ ಕಾರ್ಮಿಕರಿಗೆ ಸೂಕ್ತ ಪರಿಹಾರ ಹಾಗೂ ಭದ್ರತೆ ಒದಗಿಸ ಬೇಕು!

ಕುವೈಟ್ ಬೆಂಕಿ ದುರಂತದಲ್ಲಿ ಹಾಗೂ ನಾಗಪುರ ಪಟಾಕಿ ಫ್ಯಾಕ್ಟರಿಯಲ್ಲಿ ಪ್ರಾಣ ಕಳೆದುಕೊಂಡ ಕಾರ್ಮಿಕರ ಕುಟುಂಬಗಳ ಪರವಾಗಿ , ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ ಕೇಂದ್ರ ಸಮಿತಿಯು ತೀವ್ರ ಸಂತಾಪ ಪ್ರಕಟಿಸಿದೆ.
ಕುವೈಟ್ ದೇಶದಲ್ಲಿ ವಾಸಿಸುತ್ತಿರುವ ಭಾರತೀಯರ ಪ್ರಮಾಣ ಅಲ್ಲಿನ ಒಟ್ಟು ಜನಸಂಖ್ಯೆಯ ಪೈಕಿ ಶೇಕಡ 21 ರಷ್ಟಿದೆ. ಒಟ್ಟು 10 ಲಕ್ಷ ಭಾರತೀಯ ಜನರ ಪೈಕಿ 9 ಲಕ್ಷದಷ್ಟು ವಲಸೆ ಕಾರ್ಮಿಕರಿದ್ದಾರೆ. ಹೋಟೆಲ್ ಹಾಗೂ ಮನೆಗೆ ಲಸದ ವಲಸೆ ಕಾರ್ಮಿಕರಿಗೆ ಯಾವುದು ಕಾನೂನಾತ್ಮಕ ಸುರಕ್ಷೆ ಇಲ್ಲಾ. ದೇಶದಿಂದ ದೇಶಕ್ಕೆ ಗುತ್ತಿಗೆ ಕಾರ್ಮಿಕರನ್ನು ಸಾಗಣಿಕೆ ಮಾಡುವ ಕಾಪೋರೆಟ್ ಕಂಪನಿಗಳ ಪರವಾಗಿ ಭಾರತ ಹಾಗೂ ಕುವೈಟ್ ಸರಕಾರಗಳು ಕೆಲಸ ಮಾಡುತ್ತಿವೆ. ಭಾರತ ಹಾಗೂ ಇತರೆ ದೇಶಗಳಲ್ಲಿ ನವ ಉದಾರವಾದಿ ಆರ್ಥಿಕ ನೀತಿಗಳ ಪರಿಣಾಮಗಳಿಂದ ಭೂತಾಕಾರವಾಗಿ ಬೆಳೆಯುತ್ತಿರುವ ನಿರುದ್ಯೋಗದಿಂದಾಗಿ ಅಂತರಾಷ್ಟ್ರೀಯ ಗುಳೆ ಹೆಚ್ಚಿದೆ. ಭಾರತದ 40 ಕಾರ್ಮಿಕರ ಜೊತೆ ಪಾಕಿಸ್ತಾನ,ಬಾಂಗ್ಲಾದೇಶ, ನೇಪಾಳ ಮುಂತಾದ ದೇಶಗಳ ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ.ಹಾಗಾಗಿ, ಈ ಕಾರ್ಮಿಕರ ಸಾವಿಗೆ ಈ ದೇಶಗಳ ಸರಕಾರಗಳೂ ಹೊಣೆಯಾಗಿವೆ. ಕಾರ್ಮಿಕರ ಅನಿಯಂತ್ರಿತ ಹಾಗೂ ರಕ್ಷಣೆರಹಿತ ವಲಸೆಯನ್ನು ಟಿಯುಸಿಐ ತೀವ್ರವಾಗಿ ಖಂಡಿಸುತ್ತದೆ.
ಪಟಾಕಿ ಕಾರ್ಖಾನೆಗಳ ಸರಣಿ ದುರಂತಗಳ ಮುಂದುವರಿಕೆಯೇ ನಾಗಪುರದ 6 ಕಾರ್ಮಿಕರ ಸಾವು!
ಹಾಗಾಗಿ, ಕೇಂದ್ರ ಸರಕಾರವು ಕುವೈಟ್ ಮತ್ತು ನಾಗಪುರ ಕಾರ್ಮಿಕ ಸಂತ್ರಸ್ತರ ಕುಟುಂಬಗಳಿಗೆ ತಲಾ 25 ಲಕ್ಷ ಪರಿಹಾರ ಧನ ನೀಡಬೇಕು. ಹಾಗೂ ಈ ದುರಂತಕ್ಕೆ ಕಾರಣವಾದ ಕಂಪನಿ ಹಾಗೂ ಮ್ಯಾನೇಜ್ಮೆಂಟ್ಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಟಿಯುಸಿಐ ಈ ಮೂಲಕ ಒತ್ತಾಯಿಸುತ್ತದೆ.
ಜೊತೆಗೆ, ಉದಾರಿಕರಣ ಹಾಗೂ ಖಾಸಗಿಕರಣಗಳ ಮೂಲಕ ನಿರುದ್ಯೋಗ, ವಲಸೆ ಹಾಗೂ ಗುತ್ತಿಗೆ ಕಾರ್ಮಿಕ ಪದ್ಧತಿಗಳನ್ನು ಕಾಪಾಡುತ್ತಿರುವ ಸರಕಾರಗಳ ವಿರುದ್ಧ ಕಾರ್ಮಿಕರು ಐಕ್ಯತೆಯಿಂದ ಹೋರಾಡಬೇಕೆಂದು ಈ ಪ್ರಕಟಣೆಯ ಮೂಲಕ ಟಿಯುಸಿಐ ಕರೆ ನೀಡಿದೆ.

ಆರ್.ಮಾನಸಯ್ಯ
ಪ್ರಧಾನ ಕಾರ್ಯದರ್ಶಿ

13-6-2024
ನವದೆಹಲಿ

Related Articles

Leave a Comment