ಪತ್ರಿಕಾ ಹೇಳಿಕೆ
ಭುವನೇಶ್ವರ
18-11-2023
ಕಾಪೊ೯ರೇಟ್ ಬಂಡವಾಳ ಹಾಗೂ ಹಿಂದುತ್ವ ಫ್ಯಾಸಿಸ್ಟ್ ದಾಳಿಯ ವಿರುದ್ದ ಹೋರಾಡಿ!
ಟ್ರೇಡ್ ಯೂನಿಯನ್ ಸೆಂಟರ್ ಆಫ್ ಇಂಡಿಯಾ( TUCI) 10 ನೇ ಅಖಿಲ ಭಾರತ ಸಮ್ಮೇಳನಕ್ಕೆ ಮುನ್ನಡೆಯಿರಿ !
ಪ್ರಪಂಚದಾಧ್ಯಂತ ದುಡಿಯುವ ವಗ೯ದ ಶ್ರಮ ಶಕ್ತಿಯ ಶೋಷಣೆ ಮಿತಿ ಮೀರಿ ಮುಂದುವರೆದಿದೆ.ಈ ಶೋಷಣೆಯ ವಿರೋಧಿ ಶ್ರಮಜೀವಿ ವಗ೯ದ ಹೋರಾಟವನ್ನು ಬಗ್ಗು ಬಡೆಯಲು ಜಗತ್ತಿನಾಧ್ಯಂತ ಪ್ರಭುತ್ವ ಶಕ್ತಿಗಳು ಫ್ಯಾಸಿಸ್ಟ್ ದಬ್ಬಾಳಿಕೆಯನ್ನು ಮುಂದುವರೆಸಿವೆ.ವೇತನ ಕಡಿತ, ಕಾನೂನ ಸಂರಕ್ಷಣೆಯ ಹಿಂತೆಗೆತ, ಸಂಘಟಿಸಿ ಕೊಳ್ಳುವ ಹಕ್ಕುಗಳ ನೀರಾಕರಣೆ,ಉದ್ಯೋಗ ನಾಶ ಮತ್ತು ಉದ್ಯೋಗದ ಅಭದ್ರತೆಯನ್ನು ಪ್ರತಿಪಾದಿಸುವ ಹೊಸ ಕಾಮಿ೯ಕ ಕಾಯ್ದೆಗಳು ಎಲ್ಲಾ ದೇಶಗಳಲ್ಲಿ ಜಾರಿಗೆ ಬರುತ್ತಿವೆ.ಇದರ ಭಾಗವಗಿಯೆ ನಮ್ಮ ದೇಶವು ಹಿಂದುತ್ವವಾದಿ ಫ್ಯಾಸಿಸಂನ ಆಳ್ವಿಕೆಗೆ ಗುರಿಯಾಗಿದೆ.ದೇಶದ ಕಾಮಿ೯ಕರು ಹೋರಾಡಿ ಪಡೆದ 44 ಕೇಂದ್ರ ಕಾಮಿ೯ಕ ಕಾನೂನುಗಳ ಜಾಗದಲ್ಲಿ ಮೋದಿ ಸರಕಾರ 4 ಕಾಮಿ೯ಕ ಸಂಹಿತೆಗಳನ್ನು ಅಂಗೀಕರಿಸಿದೆ. ಎನ್ ಇಇಎಂ,ಅಪ್ರಂಟಿಶಿಪ್,ಸ್ಕೀಮ್ ವಕ್೯,ಮನೆಯಿಂದ ಕೆಲಸ,ಕೆಲಸದ ಗುತ್ತಿಗೆ,ಹೊರಗುತ್ತಿಗೆ ಮುಂತಾದ ಹೆಸರಲ್ಲಿ ಕನಿಷ್ಟ ವೇತನ ಕೊಡದೆ ಗರಿಷ್ಟ ಕೆಲಸ ತೆಗೆದು ಕೊಳ್ಳುವ ಅಮಾನವೀಯ ಪದ್ದತಿ ಜಾರಿಯಾಗಿದೆ.
ಇದರ ವಿರುದ್ದ ಕಾಮಿ೯ಕರನ್ನು ಸಂಘಟಿಸ ಬೇಕಾದ ಕೇಂದ್ರ ಕಾಮಿ೯ಕ ಸಂಘಟನೆಗಳು ‘ಆಥಿ೯ಕವಾದ’ ಅಂಟು ಜಾಡ್ಯಕ್ಕೆ ಗುರಿಯಾಗಿವೆ.ಕಾಮಿ೯ಕ ವಗ೯ದ ಕ್ರಾಂತಿಕಾರಿ ರಾಜಕೀಯದಿಂದ ವಿಮುಖವಾಗಿವೆ.ಕಾಮಿ೯ಕ ರಂಗದಲ್ಲಿ ವಿಚ್ಛಿದ್ರಕಾರಿ ಹಾಗೂ ಸುಧಾರಣಾವಾದಿ ಧೋರಣೆ ಮೇಲುಗೈ ಸಾಧಿಸಿದೆ.
ಇಂಥಹ ಕ್ಲಿಷ್ಟಕರವಾದ ಸಂದರ್ಭದಲ್ಲಿ ಸಂಘಟನೆಯ 10 ನೇ ಅಖಿಲ ಭಾರತ ಸಮ್ಮೇಳನವನ್ನು ಜನವರಿ 27-29/2024 ರಂದು ಭುವನೇಶ್ವರದಲ್ಲಿ ನಧಫೆಸಲು ಟಿಯುಸಿಐ ನಿಧ೯ರಿಸಿದೆ.
ನಗರದಲ್ಲಿ ನಿನ್ನೆ ನಡೆದ ಸಭೆಯಲ್ಲಿ 43 ಜನರ ಸ್ವಾಗತ ಸಮಿತಿಯನ್ನು ರಚಿಸಲಾಗಿದೆ. ಖ್ಯಾತ ಪರಿಸರವಾದಿ ಹಾಗೂ ಸಮಾಜಿಕ ಕಾಯ೯ಪಟು ಶ್ರೀ ಪ್ರಫುಲ ಸಾಮಂತರ ಅವರನ್ನು ಸ್ವಾಗತ ಸಮಿತಿಯ ಅಧ್ಯಕ್ಷರಾಗಿ, ಎಡ ಚಿಂತಕರಾದ ಶಿಮಂತ ಮಹಂತಿಯವರನ್ನು ಉಪಾಧ್ಯಕ್ಷರನ್ನಾಗಿ ಹಾಗೂ ಕಾಮ್ರೇಡ್ ಶಂಕರ ಇಂಕ್ವಿಲಾಬ್ ಅವರನ್ನು ಕಾಯ೯ದಶಿ೯ಯಾಗಿ ನೇಮಿಸಲಾಗಿದೆ.ಕಾಮಿ೯ಕ,ರೈತ, ಮಹಿಳಾ,ವಿದ್ಯಾಥಿ೯,ಯುವಜನ,ಆದಿವಾಸಿ,ದಲಿತ ಹಾಗೂ ಸ್ಲಮ್ ಸಂಘಟನೆಯ ಮುಂದಾಳುಗಳು ಸ್ವಾಗತ ಸಮಿತಿಯಲ್ಲಿದ್ದಾರೆ.ದೇಶ ವಿದೇಶಗಳ ಸಹೋದರ ಕಾಮಿ೯ಕ ಸಂಘಟನೆಯ ಪ್ರತಿನಿಧಿಗಳ ಜತೆಗೆ,ದೇಶದ ವಿವಿಧ ರಾಜ್ಯಗಳ ವಿವಿಧ ಕಾಮಿ೯ಕ ರಂಗಳ ಕಾಮಿ೯ಕರಿಂದ ಚುನಾಯಿತರಾದ ಪ್ರತಿನಿಧಿಗಳು ಬರಲಿದ್ದಾರೆ.
ದುಡಿಯುವ ಜನತೆಗೆ ಕಾಮಿ೯ಕ ವಗ೯ದ ಕ್ರಾಂತಿಕಾರಿ ರಾಜಕೀಯ ಶಿಕ್ಷಣ ನೀಡುವ, ಅಸಂಘಟಿತ ವಲಯದ ಕಾಮಿ೯ಕರ ಬಲಿಷ್ಟ ಸಂಘಟನೆ ಕಟ್ಟುವ,ಜಾತಿ ಆಧಾರಿತ ಅಧಿಕಾರ ಹಾಗೂ ಆಸ್ತಿ ಸಂಬಂಧಗಳಿರುವ ಭಾರತದ ಸಮಾಜದಲ್ಲಿ ಸ್ವಾತಂತ್ರ್ಯ ,ಪ್ರಜಾಪ್ರಭುತ್ವ ಹಾಗೂ ಸಮಾಜವಾದಕ್ಕಾಗಿ ಹೋರಾಡಲು ಕಾಮಿ೯ಕ ವಗ೯ಕ್ಕೆ ತಕ್ಕ ಸಂಘಟನೆಯಾಗಿ ಟಿಯುಸಿಐನ್ನು ಪುನರ್ ನಿಮಿ೯ಸುವ ಬಹು ಮುಖ್ಯವಾದ ಕಾಯ೯ಸೂಚಿ ಸಮ್ಮೇಳನದ್ದಾಗಿದೆ.ಹಾಗೆಯೆ,ಕಾಪೊ೯ರೇಟ್ ಬಂಡವಾಳ ಹಾಗೂ ಹಿಂದುತ್ವ ಫ್ಯಾಸಿಸ್ಟ್ ಆಳ್ವಿಕೆಯನ್ನು ಸೋಲಿಸುವ ತಕ್ಷಣದ ಕಾಯ೯ಭಾರದ ಕರೆಯನ್ನು ಈ ಸಮ್ಮೇಳನ ನೀಡಲಿದೆ.
ಆರ್.ಮಾನಸಯ್ಯ
ಕೇಂದ್ರ ಸಮನ್ವಯಕಾರ
ಶಂಕರ ಇಂಕ್ವಿಲಾಬ್
ಸಮನ್ವಯಕಾರ ಒರಿಸ್ಸಾ